Categories: sambar/Curry/Huli

Ingredients

  • ಅಮಟೆ (ಅಂಬಟೆ) ಕಾಯಿ - 6
  • ಲವಂಗ - 3
  • ಕೊತ್ತಂಬರಿ - 1 1/4 ಚಮಚ
  • ಸಾಸಿವೆ - 1 /2 ಚಮಚ
  • ಒಣಮೆಣಸು - 3 (ಖಾರಕ್ಕೆ ತಕ್ಕಂತೆ)
  • ತೆಂಗಿನತುರಿ - 1/2 ಕಪ್
  • ರುಚಿಗೆ ತಕ್ಕಷ್ಟು ಉಪ್ಪು
  • ಬೆಲ್ಲ - 4 ಚಮಚ (ಸಿಹಿಯಾಗುವಷ್ಟು)
  • ಒಗ್ಗರಣೆಗೆ: ಎಣ್ಣೆ - 2 ಚಮಚ, ಉದ್ದಿನಬೇಳೆ - 1/2 ಚಮಚ, ಸಾಸಿವೆ - 1/4 ಚಮಚ, ಚಿಟಿಕೆ ಇಂಗು, ಕರಿಬೇವು

Directions

  1. ಒಂದು ಪಾತ್ರೆಯಲ್ಲಿ 3 ಲೋಟದಷ್ಟು ನೀರು ಹಾಕಿ ಅಮಟೆಕಾಯಿಯನ್ನು ಮೆತ್ತಗೆ ಬೇಯಿಸಿ.

  2. ಬೆಂದ ಅಮಟೆಕಾಯಿ ತಣ್ಣಗಾದ ನಂತರ ಅದಕ್ಕೆ ಉಪ್ಪು, ಬೆಲ್ಲ ಸೇರಿಸಿ. ಅಮಟೆಕಾಯಿಯನ್ನು ಹಿಂಡಿ, ಸಿಪ್ಪೆ ಹಾಗೂ ಓಟೆಯನ್ನು ಆ ಮಿಶ್ರಣದಲ್ಲೇ ಬಿಡಿ.

  3. ಲವಂಗ, ಕೊತ್ತಂಬರಿ, ಒಣಮೆಣಸು, ಸಾಸಿವೆ ಇಷ್ಟನ್ನೂ ಒಂದು ಚಮಚ ಎಣ್ಣೆ ಹಾಕಿ ಹುರಿದುಕೊಂಡು, ತೆಂಗಿನತುರಿಯೊಡನೆ ನುಣ್ಣಗೆ ರುಬ್ಬಿಕೊಳ್ಳಿ.

  4. ಒಂದು ದಪ್ಪ ತಳದ ಪಾತ್ರೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ, ಉದ್ದಿನಬೇಳೆ, ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಮಾಡಿಕೊಳ್ಳಿ. ಇದಕ್ಕೆ ಅಮಟೆಕಾಯಿ ಮಿಶ್ರಣ, ರುಬ್ಬಿದ ಮಸಾಲೆ ಹಾಕಿ 4 – 5 ನಿಮಿಷ ಕುದಿಸಿ ಇಳಿಸಿ.

  5. ಈ ಅಮಟಿ ಅನ್ನದೊಡನೆ ಹಾಕಿಕೊಳ್ಳಲು ಚೆನ್ನಾಗಿರುತ್ತದೆ. ಫ್ರಿಜ್ ನಲ್ಲಿಟ್ಟು 1 ವಾರದವರೆಗೂ ಬಳಸಬಹುದು.

Email to a friend | Print this recipe | Back