ಸಾಂಬಾರ್ ಅಪ್ಪೆಹುಳಿ / Sambar Appehuli
(from Nandini’s recipe box)
Source: http://vanilohit.blogspot.in/search/label/%E0%B2%AE%E0%B3%87%E0%B2%B2%E0%B3%8B%E0%B2%97%E0%B2%B0
Categories: saaru/Rasam
Ingredients
- ಕಂಚಿಕಾಯಿ - 2 (ಅಥವಾ ಕಂಚಿಕಾಯಿಯ ರಸ - 1 ಕಪ್)
- ಲವಂಗ - 3
- ಕೊತ್ತಂಬರಿ - 1 1/2 ಚಮಚ
- ಸಾಸಿವೆ - 1/2 ಚಮಚ
- ಒಣಮೆಣಸು - 3 (ಖಾರಕ್ಕೆ ತಕ್ಕಂತೆ)
- ತೆಂಗಿನತುರಿ - 3 ರಿಂದ 4 ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಬೆಲ್ಲ - 1 ನಿಂಬೆಗಾತ್ರದಷ್ಟು ಅಥವಾ ಸಿಹಿಯಾಗುವಷ್ಟು
- ಒಗ್ಗರಣೆಗೆ: ಎಣ್ಣೆ, ಸಾಸಿವೆ, ಇಂಗು, ಕರಿಬೇವು
Directions
-
ಕಂಚಿಕಾಯಿಯ ಸಿಪ್ಪೆ ತೆಗೆದು, ಎರಡು ಭಾಗ ಮಾಡಿಕೊಳ್ಳಿ.
-
ಒಂದು ಬೌಲ್ ನಲ್ಲಿ ಒಂದು ಚಮಚದಷ್ಟು ಉಪ್ಪು ಹಾಕಿಕೊಂಡು, ಅದಕ್ಕೆ ಕಂಚಿಕಾಯಿಯ ರಸವನ್ನು ಹಿಂಡಿ. ಉಪ್ಪನ್ನು ಹಾಕಿಕೊಳ್ಳುವುದರಿಂದ ಕಂಚಿ ರಸ ಕಹಿಯಾಗುವುದಿಲ್ಲ.
-
ಬಾಣಲೆಯಲ್ಲಿ ಒಂದು ಚಮಚದಷ್ಟು ಎಣ್ಣೆ ಕಾಯಿಸಿ ಲವಂಗ, ಒಣಮೆಣಸು, ಸಾಸಿವೆ, ಕೊತ್ತಂಬರಿ ಹಾಕಿ ಪರಿಮಳ ಬರುವಂತೆ ಹುರಿದುಕೊಳ್ಳಿ.
-
ಹುರಿದ ಸಾಮಗ್ರಿಗಳನ್ನು ಕಾಯಿತುರಿ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ರುಬ್ಬುವಾಗ ನೀರಿನ ಬದಲು ಕಂಚಿರಸವನ್ನೇ ಬಳಸಿ.
-
ರುಬ್ಬಿಕೊಂಡ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಸೇರಿಸಿ ಐದು ನಿಮಿಷ ಕುದಿಸಿ. ಅಪ್ಪೆಹುಳಿಯನ್ನು ತೆಳ್ಳಗೆ ಮಾಡಲು ಕುದಿಸುವ ಮುನ್ನ ಒಂದೂವರೆಯಿಂದ ಎರಡು ಕಪ್ ನಷ್ಟು ನೀರನ್ನು ಸೇರಿಸಿ.
-
ಅಪ್ಪೆಹುಳಿಯನ್ನು ಕುದಿಸಿ ಇಳಿಸಿದ ನಂತರ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಕೊಡಿ.
-
ಈ ಅಪ್ಪೆಹುಳಿ ಅನ್ನದೊಡನೆ ಹಾಕಿಕೊಳ್ಳಲು ಅಥವಾ ಹಾಗೇ ನೆಂಜಿಕೊಳ್ಳಲು ಚೆನ್ನಾಗಿರುತ್ತದೆ. ಚೆನ್ನಾಗಿ ಕುದಿಸಿ ನಾಲ್ಕೈದು ದಿನ ಇಟ್ಟುಕೊಂಡು ಬಳಸಬಹುದು.
-
ನಿಂಬೆ ಹಣ್ಣಿನಿಂದಲೂ ಈ ಅಪ್ಪೆಹುಳಿಯನ್ನು ತಯಾರಿಸಬಹುದು.